ಮಂಗಳವಾರ, ಡಿಸೆಂಬರ್ 16, 2008

ಇರಾಕ್ ನಲ್ಲಿ ಬುಷ್ ಗೆ ಬೂಟಿನಿಂದ ವಿದಾಯ ಹೇಳಿದ ಕ್ಷಣಗಳ ದ್ರಿಷ್ಯಗಳನ್ನು ವೀಕ್ಷಿಸಿ...!

ಇರಾಕ್ ನ ಮೇಲೆ ಅಮೇರಿಕಾ ನಡೆಸಿದ ಯುದ್ದದಿಂದ ಮನ ನೊಂದ ಪತ್ರಕರ್ತನೊಬ್ಬ ಬುಷ್ ಗೆ ಹೀಳಿದ್ ವಿದಾಯದ ಮಾತುಗಳಿವು.........ಕೆಳಗಿನ ವಿಡಿಯೋ ಚೆಕ್ ಮಾಡಿ.



http://www.youtube.com/watch?v=NuyzA5dT5Kk&eurl=http://english.aljazeera.net/news/middleeast/2008/12/20081214201750232275.html&feature=player_embedded

ಸೋಮವಾರ, ಡಿಸೆಂಬರ್ 15, 2008

ಅಮರಿಕ ಅಧ್ಯಕ್ಷ ಬುಶ್‌ಗೆ ಬೂಟುಗಳನ್ನೆಸೆದು ವಿದಾಯ ಹೇಳಿದ ಇರಾಕಿ ಪತ್ರಕರ್ತ

"ಏ ನಾಯಿ, ಇದು ನಿನಗೆ ಬೀಳ್ಕೊಡುಗೆಯ ಮುತ್ತು. ಇದು ವಿಧವೆಯರು, ಅನಾಥರು ಹಾಗೂ ಸತ್ತವರ ಕೊಡುಗೆ "
ಬಾಗ್ದಾದ್, ಡಿ, 15 : ಜಗತ್ತಿನ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಇಂದು ಇರಾಕಿನಲ್ಲಿ ಮಹಾಮಂಗಳಾರತಿ ಆಗಿದೆ. ಇರಾಕಿನ ವಾರ್ತಾ ವಾಹಿನಿ ವರದಿಗಾರರೊಬ್ಬರು ಬುಷ್ ಕಡೆಗೆ ತನ್ನ ಎರಡು ಬೂಟುಗಳನ್ನು ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿರುವ ಪ್ರಕರಣ ನಡೆದಿದೆ.
ಇರಾಕ್ ಪ್ರವಾಸದಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಹಾಗೂ ಇರಾಕ್ ಅಧ್ಯಕ್ಷ ನೌರಿ ಅಲ್ ಮಾಲಿಕಿ ಇಬ್ಬರು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಯಥಾ ಪ್ರಕಾರ ನೂರಾರು ಮಂದಿ ಪತ್ರಕರ್ತರು ಗುಂಪು ಪತ್ರಿಕಾಗೋಷ್ಠಿ ಪಾಲ್ಗೊಂಡಿದ್ದರು. ಅಲ್ ಬಾಗ್ದಾದೀಯಾ ಎಂಬ ಸ್ಥಳೀಯ ವಾರ್ತಾ ವಾಹಿನಿ ವರದಿಗಾರ ಮುಂತೆದಾರ್ ಅಲ್ ಜೀದಿ, ಬುಷ್ ಮೇಲೆ ತನ್ನ ಎರಡು ಬೂಟುಗಳನ್ನು ಒಂದರ ಮೇಲೊಂದು ಎಸೆದು ಅರೇಬಿಕ್ ಭಾಷೆಯಲ್ಲಿ "ಏ ನಾಯಿ,
ಇದು ನಿನಗೆ ಬೀಳ್ಕೊಡುಗೆಯ ಮುತ್ತು. ಇದು ವಿಧವೆಯರು, ಅನಾಥರು ಹಾಗೂ ಸತ್ತವರ ಕೊಡುಗೆ " ಎಂದು ಅರಚಿದರು. ಚಪ್ಪಲಿಯೇಟು ಅಥವಾ ಶೂಗಳಿಂದ ಅವಮರ್ಯಾದೆ ತೋರಿಸುವುದು ಅತ್ಯಂತ ಅವಮಾನಕರ ಎಂಬುದಾಗಿ ಅರಬ್‌ ಸಂಸ್ಕೃತಿಯಲ್ಲಿ ಪರಿಗಣಿಸಲಾಗಿದೆ. 2003 ರಲ್ಲಿ ಅಮೆರಿಕದ ಸೈನಿಕರು ಸದ್ದಾಂ ಹುಸ್ಸೈನ್ ಪ್ರತಿಮೆ ಹೊಡೆದು ಉರುಳಿಸಿದಾಗ ನೆರೆದಿದ್ದ ಜನ ಪ್ರತಿಮೆಗೆ ಬೂಟು ಎಸೆದಿದ್ದರು.
ಜೈದಿಗೆ ಬೆಂಬಲ :
ಜೈದಿ ಶಿಯಾ ಮುಸ್ಲಿಂ ಆಗಿದ್ದು , ಕಳೆದ ವರ್ಷ ಶಿಯಾ ಉಗ್ರರು ಆತನನ್ನು ಅಪಹರಿಸಿದ್ದರು, ಅಲ್-ಭಾಗ್ದಾದಿಯ ಟಿವಿ ಮಧ್ಯ ಪ್ರವೇಶಿಸಿ ಆತನನ್ನು ಬಿಡುಗಡೆ ಮಾಡಿಸಿತ್ತು. ಅರಬ್ ರಾಷ್ಟ್ರಗಳು ಹಾಗು ಮಧ್ಯ ಪ್ರಾಚ್ಯದಾದ್ಯಂತ ಮುಂತಾಜಿರ್ ಅಲ್-ಜೈದಿ ಅನ್ನು ಜನ ಬೆಂಬಲಿಸಿದ್ದಾರೆ. ಅರಬ್ ಟಿವಿ ಚಾನೆಲ್ ಗಳು ಬೂಟು ಎಸೆದ ದ್ರಿಷ್ಯವನ್ನು ಪದೇ ಪದೇ ಪ್ರಸಾರ ಮಾಡುತ್ತಿದೆ. ಬುಷ್ ನೀತಿಯಿಂದ ರೋಸಿ ಹೋಗಿರುವ ಅರಬ್ ಪತ್ರಕರ್ತರು , ವಿಶ್ಲೇಷಕರು ಸಹ ಅಲ್-ಜೈದಿಯನ್ನು ಸಮರ್ಥಿಸಿದ್ದಾರೆ. ಲಂಡನ್ ಮೊಲದ ಪ್ರಭಾವಿ ಅರಬ್ ದಿನ ಪತ್ರಿಕೆಯೊಂದರ ಸಂಪಾದಕರು ಈ ಘಟನೆ ಬುಷ್ ನಂತಹ ಯುದ್ಧ ಅಪರಾಧಿಗೆ ಸರಿಯಾದ ಬೀಳ್ಕೊದುಗೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ...!

7 ಚರ್ಚ್ ಗಳಿಗೆ ಜಿಲ್ಲಾಡಳಿತದ ಬೀಗ ಮುದ್ರೆ : ಪ್ರತಿಭಟನೆ



ದಾವಣಗೆರೆ, ಡಿ.14 : ಜಿಲ್ಲಾಡಳಿತ ಸಂಘ ಪರಿವಾರದ ಮುಖವಾಣಿಯಾಗಿ ಕಾರ್ಯ ನಿರ್ವಹಿಸುತ್ತಿದೆ . ಈ ಕ್ರಮವನ್ನು ವಿರೋಧಿಸಿ ರಾಜ್ಯದಾದ್ಯಂತ ಉಗ್ರ ಸ್ವರೂಪದ ಚಳುವಳಿ ನಡೆಸಬೇಕಾಗುತ್ತದೆ ಎಂದು ಕೋಮು ಸೌಹಾರ್ಧ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ಪತ್ರಕರ್ತ ಚಂದ್ರಶೇಖರ್ ತೋರನಘಟ್ಟ ಎಚ್ಹರಿಸಿದ್ದಾರೆ.

ನಗರದಲ್ಲಿನ ಏಳು ಚರ್ಚ್ ಗಳಿಗೆ ಬೀಗ ಮುದ್ರೆ ಹಾಕಿರುವ ಚರ್ಚ್ ಗಳಿಗೆ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಸೋಮವಾರ ಬೆಳಗ್ಗೆ 11 ಗಂಟೆಗೆ ವಿವಿಧ ಪ್ರಗತಿಪರ ಸಂಘಟನೆಗಳ ನೇತ್ರತ್ವದಲ್ಲಿ ಜಿಲ್ಲದಿಕಾರಿ ಕಚೇರಿ ಎದುರು ಪ್ರತಿಭಟನೆ ಎಂದು ಅವರು ತಿಳಿಸಿದ್ದಾರೆ.

ಸೆ.23 ರಂದು ದಾವಣಗೆರೆಯಲ್ಲಿ ಕ್ರೈಸ್ತ ಸಮುದಾಯದ ಪ್ರಾರ್ಥನಾ ಮಂದಿರಗಳ ಮೇಲಿನ ಸಂಘ ಪರಿವಾರದ ಗೂಂಡಾಗಳ ದಾಳಿಯನ್ನು ಖಂಡಿಸಿ ಕೋಮು ಸೌಹಾರ್ಧ ವೇದಿಕೆ ಸಮಾವೇಶ ನಡೆಸಿದ ನಂತರ ಜಿಲ್ಲಾಡಳಿತ ನಗರದ ಏಳು ಚರ್ಚ್ ಗಳಿಗೆ ಏಕಾ ಏಕಿ ಬೀಗ ಮುದ್ರೆ ಹಾಕಿದೆ . ಕ್ರೈಸ್ತ ರ ಪ್ರಾರ್ಥನೆ ಮಾಡುವ ಹಕ್ಕನ್ನು ಜಿಲ್ಲಾಡಳಿತ ಕಸಿದು ಕೊಂಡಿದೆ ಎಂದು ಚಂದ್ರಶೇಖರ್ ಆರೋಪಿಸಿದರು .