ದಾವಣಗೆರೆ, ಡಿ.14 : ಜಿಲ್ಲಾಡಳಿತ ಸಂಘ ಪರಿವಾರದ ಮುಖವಾಣಿಯಾಗಿ ಕಾರ್ಯ ನಿರ್ವಹಿಸುತ್ತಿದೆ . ಈ ಕ್ರಮವನ್ನು ವಿರೋಧಿಸಿ ರಾಜ್ಯದಾದ್ಯಂತ ಉಗ್ರ ಸ್ವರೂಪದ ಚಳುವಳಿ ನಡೆಸಬೇಕಾಗುತ್ತದೆ ಎಂದು ಕೋಮು ಸೌಹಾರ್ಧ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ಪತ್ರಕರ್ತ ಚಂದ್ರಶೇಖರ್ ತೋರನಘಟ್ಟ ಎಚ್ಹರಿಸಿದ್ದಾರೆ.
ನಗರದಲ್ಲಿನ ಏಳು ಚರ್ಚ್ ಗಳಿಗೆ ಬೀಗ ಮುದ್ರೆ ಹಾಕಿರುವ ಚರ್ಚ್ ಗಳಿಗೆ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಸೋಮವಾರ ಬೆಳಗ್ಗೆ 11 ಗಂಟೆಗೆ ವಿವಿಧ ಪ್ರಗತಿಪರ ಸಂಘಟನೆಗಳ ನೇತ್ರತ್ವದಲ್ಲಿ ಜಿಲ್ಲದಿಕಾರಿ ಕಚೇರಿ ಎದುರು ಪ್ರತಿಭಟನೆ ಎಂದು ಅವರು ತಿಳಿಸಿದ್ದಾರೆ.
ಸೆ.23 ರಂದು ದಾವಣಗೆರೆಯಲ್ಲಿ ಕ್ರೈಸ್ತ ಸಮುದಾಯದ ಪ್ರಾರ್ಥನಾ ಮಂದಿರಗಳ ಮೇಲಿನ ಸಂಘ ಪರಿವಾರದ ಗೂಂಡಾಗಳ ದಾಳಿಯನ್ನು ಖಂಡಿಸಿ ಕೋಮು ಸೌಹಾರ್ಧ ವೇದಿಕೆ ಸಮಾವೇಶ ನಡೆಸಿದ ನಂತರ ಜಿಲ್ಲಾಡಳಿತ ನಗರದ ಏಳು ಚರ್ಚ್ ಗಳಿಗೆ ಏಕಾ ಏಕಿ ಬೀಗ ಮುದ್ರೆ ಹಾಕಿದೆ . ಕ್ರೈಸ್ತ ರ ಪ್ರಾರ್ಥನೆ ಮಾಡುವ ಹಕ್ಕನ್ನು ಜಿಲ್ಲಾಡಳಿತ ಕಸಿದು ಕೊಂಡಿದೆ ಎಂದು ಚಂದ್ರಶೇಖರ್ ಆರೋಪಿಸಿದರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ