ನಾಸಿಕ, ನ.15 : ಮಾಲೆಂಗಾವ್ ಸ್ಪೋಟದ ಆರೋಪಿ ದಯಾನಂದ್ ಪಾಂಡೆಯ ಪಾಸ್ ಬುಕ್ ಒಂದು ತಮಗೆ ದೊರತಿದ್ದು , ಅದರಿಂದ ಆತನ ಹಣದ ವಹಿವಾಟು ಖಚಿತಪಡಿಸಲು ಸಹಕಾರ ದೊರೆಯಲಿದೆ ಎಂದು ಪೋಲಿಸರಿಂದು ಪ್ರತಿಪಾದಿಸಿದ್ದಾರೆ. ಮಾಲೆಂಗಾವ್ ಸ್ಪೋಟ ಹಾಗೂ ಇತರ ಹಣ ಬದಲಾವಣೆಯ ಕುರಿತು ಮಾತನಾಡುತ್ತಿದ್ದ ಪಬ್ಲಿಕ್ ಪ್ರೋಸಿಕ್ಯುತರ್ ಮಿಸಾರ್, ಅಭಿನವ್ ಭಾರತ್ ನ ಖಜಾಂಜಿ ಅಜಯ್ ರಹಿರ್ಕರ್ , ಪಾಂಡೆಗೆ ಅಪಾರ ಮೊತ್ತದ ಹಣ ನೀಡಿದ್ದು, ಅದನ್ನು ಅರ್.ಡಿ.ಎಕ್ಸ್ ಇತರ ಸ್ಪೋಟಕ ಹಾಗೂ ಟೈಮರ್ ಖರೀದಿಗೆ ಉಪಯೋಗಿಸಲಾಗಿದೆಯೂ? ಎಂಬುದರ ತನಿಕೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳಾದ ಶ್ಯಾಮಲಾಲ್ ಸಾಹು ಹಾಗೂ ಶಿವ ನಾರಾಯಣ ಸಿಂಗ್ ರಿಂದ ಎರಡು ಬಳಕೆಯಾಗದ ಟೈಮರ್ ಗಳನ್ನೂ ವಶಪಡಿಸಲಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಬಿಗು ಬಂದೋಬಸ್ತ್ ನಲ್ಲಿ ಪಾಂಡೆಯನ್ನು ಅಪರಾಹ್ನ 3.40 ರ ವೇಳೆ ನ್ಯಾಯಾಲಯಕ್ಕೆ ತರಲಾಯಿತು. ಖಾದಿ ಕುರ್ತ ಹಾಗು ಲುಂಗಿ ಧರಿಸಿದ್ದ ಆತನನ್ನು ಮುಖಕ್ಕೆ ಕಪ್ಪು ಮುಸುಕು ಹಾಕಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನಿರರ್ಗಳ ಹಿಂದಿಯಲ್ಲಿ ಮಾತನಾಡಿದ ಪಾಂಡೆ, ತನ್ನ ಹೆಸರು ಪಾಂಡೆಯಲ್ಲ , ಸುಧಾಕರ ದ್ವಿವೇದಿ ಎಂದು ವಾದಿಸಿದರು. ಪಾಂಡೆ , 2008 ರ ಎ.12ರಂದು ಜ.26 ರಂದು ಫರೀದಾಬಾದ್ ನಲ್ಲಿ ನಡೆದ 'ಗುಪ್ಯ ಸಬೆಗಳಲ್ಲಿ ' ಭಾಗವಹಿಸಿದ್ದನು. ಮಲೆನ್ಗಾವ್ ಸ್ಪೋಟಕ್ಕೆ ಮೊದಲು ಪುಣೆಯಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಹಾಜರಿದ್ದರೆಂದು ಪಬ್ಲಿಕ್ ಪ್ರೋಸಿಚುತೆರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆಂದು ಮಿಸಾರ್ ಹೇಳಿದರು. ಪೊಲೀಸರ ಪ್ರಕಾರದೇಶದ ಬೇರೆ ಬೇರೆ ಕಡೆ ನಡೆದ ಸಭೆಗಳಲ್ಲಿ ಮಾಲೆಂಗಾವ್ ಸ್ಪೋಟದ ಪಿತೂರಿ ಹೆಣೆಯಲಾಗಿದೆ. ಅಗಸ್ಟ್ ನಲ್ಲಿ ಲೇ|ಕ| ಶ್ರೀಕಾಂತ್ ಪುರೋಹಿತ್ ಹಾಗೂ ಪ್ರದಾನ ಆರೋಪಿ ರಾಮ್ಜಿಯ ಭೇಟಿಗೂ ಪಾಂಡೆ ವ್ಯವಸ್ಥೆ ಮಾಡಿದ್ದರೆಂದು ಅವರು ತಿಳಿಸಿದರು. ರಾಮ್ಜಿಯ ಬಂಧನ ಇನ್ನಷ್ಟೇ ಆಗ ಬೇಕಾಗಿದೆ. ರಾಮ್ಜಿಯ ಪತ್ತೆಗಾಗಿ ಪಾಂಡೆ ಗೆ ಕಸ್ತೋಡಿ ಕೇಳಲಾಗಿದೆ. ದೇಶದ ಇತರೆಡೆಗಳಲ್ಲಿ ನಡೆದ ಸ್ಪೋಟ ಗಳಲ್ಲೂ ಪಾಂಡೆಯ ಪಾತ್ರವಿದೆಯೇ ಎಂಬುದನ್ನೂ ತನಿಕೆ ನಡೆಸಬೇಕಿದೆ ಎಂದು ಮಿಸಾರ್ ತಿಳಿಸಿದರು. ಪಾಂಡೆ ಭಂದಿತೆ ಸಾದ್ವಿ ಪ್ರಜ್ಞ ಸಿಂಗ್ ತಕೂರ್ ಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರೆನ್ದೂ ತಿಳಿಸಿದರು.
A child injured in the Malegaon blasts.