ನ.18ರವರೆಗೆ ಪೋಲಿಸ್ ಕಸ್ಟಡಿ
ನಾಸಿಕ, ನ 15: ಮಲೆನ್ಗಾವ್ ಸ್ಪೋಟದ ಆರೋಪಿ ಲೇ|ಕ|ಶ್ರೀಕಾಂತ್ ಪುರೋಹಿತ್ 2006 ರಲ್ಲಿ ಜಮ್ಮು-ಕಾಶ್ಮೀರದಿಂದ 60 ಕಿ.ಗ್ರಾಂ. ಅರ್.ಡಿ.ಎಕ್ಸ್ ಖರೀದಿಸಿದ್ದು, ಅದರ ಒಂದು ಭಾಗವನ್ನು ಮಲೆನ್ಗವ್ ಹಾಗೂ ಸಂಜೋತಾ ಎಕ್ಸಪ್ರೆಸ್ಸ್ಪೋಟಗಳಿಗೆ ಬಳಸಿದ್ದಾರೆಂದು ಪ್ರಸಿಕುಶನ್ ಇಂದು ನ್ಯಾಯಾಲಯದಲ್ಲಿ ವಾದಿಸುವುದರೊಂದಿಗೆ, ನಡೆಯುತ್ತಿರುವ ATS ತನಿಖೆಗೆಹೊಸ ತಿರುವೊಂದನ್ನು ನೀಡಿದೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಪುರೋಹಿತರಿಗೆ ವಿಸ್ತ್ರತ ವಿಚಾರಣೆಗಾಗಿ ನ.18 ರತನಕ ಪೋಲಿಸ್ ಬಂಧನ ವಿಧಿಸಲಾಯಿತು. ತಾನು 60 ಕಿ.ಗ್ರಾಂ ಅರ್.ಡಿ.ಎಕ್ಸ್ ಅನ್ನು ಜಮ್ಮು-ಕಾಶ್ಮೀರದಿಂದ ಖರೀದಿಸಿರುವುದಾಗಿಪುರೋಹಿತ್ 2006 ರಲ್ಲಿ ಹೇಳಿಕೊಂಡಿದ್ದರೆಂದು ನ್ಯಾಲಯಕ್ಕೆ ಸಾಕ್ಷಿಯೊಬ್ಬ ಹೇಳಿಕೆ ನೀಡಿದ್ದಾನೆ. ಅದನ್ನೇ ಮಾಲೆಂಗವ್ ಹಾಗೂಸಂಜೋತಾ ಸ್ಪೋಟಗಳಿಗೆ ಬಳಸಿರುವ ಶಂಕೆಯಿದೆ. ಪುರೋಹಿತ್ ಅರ್.ಡಿ.ಎಕ್ಸ್ ನ ಭಾಗವೊಂದನ್ನು ಭಗವಾನ್ ಎಂಬಾತನಿಗೆ ನೀಡಿದ್ದು, ಅದು ಸಂಜೋತಾ ಸ್ಪೋಟಕ್ಕೆಉಪಯೋಗವಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದರು.
ಎ.ಟಿ.ಎಸ್ ಬೇಡ 'ಉಗ್ರ' ಸ್ವಾಮೀಜಿಯ ಮೊರೆ.
ನಾಸಿಕ: ಎ.ಟಿ.ಎಸ್ ಅದಿಕಾರಿಗಳು ತನಗೆ ಬಂದನದಲ್ಲಿ ಮೂರನೇ ದರ್ಜೆ ಚಿತ್ರ ಹಿಂಸೆ ನೀಡುತ್ತಿದ್ದು, ತನ್ನ ಜೀವಅಪಾಯದಲ್ಲಿದೆಯೆಂದು ಮಲೆನ್ಗವ್ ಸ್ಪೋಟದ ಬಂಧಿತ ಆರೋಪಿ ಸ್ವಾಮಿ ಅಮ್ರುಥಾನಂದ ಅಲಿಯಾಸ್ ದಯಾನಂದನ ಪಾಂಡೆಅಲಿಯಾಸ್ ಸುಧಾಕರ ದ್ವಿವೇದಿ ನಾಸಿಕದ ನಯಾಲಯವೊಂದರಲ್ಲಿ ನಿನ್ನೆ ದೂರಿದ್ದಾರೆ. "ಗುರುವಾರ ತನ್ನನ್ನು ಮುಂಬಯಿಗೆ ತಂದಬಳಿಕ ನಾನು ಸಂಖಷ್ಟದಲ್ಲಿದ್ದೇನೆ. ಪೋಲಿಸ್ರು ನನ್ನನ್ನು ಯದ್ವಾ ತದ್ವಾ ಥಳಿಸಿದ್ದರಲ್ಲದೆ ಮೂರನೇ ದರ್ಜೆಯ ಚಿತ್ರ ಹಿಂಸೆನೀಡುತ್ತಿದ್ದಾರೆ. " ಎಂದು ಅವರು ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಎಚ್.ಕೆ ಗಂಥ್ರ ರಲ್ಲಿ ಆರೋಪಿಸಿದರು. ಬಂಧನದಲ್ಲಿ ಯಾವುದಾದರೂ ಸಮಸ್ಯೆಗಳನ್ನು ಅನುಭವಿಸುತ್ತಿರುವಿರೆ? ಅಥವಾ ಯಾವುದಾದರೂ ದೂರುಗಳಿವೆಯೇ? ಎಂಬ ನ್ಯಾಯಾಧೀಶರಪ್ರಶ್ನೆಗೆ ಹಿಂದಿಯಲ್ಲಿ ಉತ್ತರಿಸಿದ ಪಾಂಡೆ , ಯಾವಾಗ ತನ್ನ ಬಂಧನವಾಯಿತೋ ಅಂದಿನಿಂದ ನಾನು ಸಮಸ್ಯೆಯಲ್ಲಿಯೇ ಇದ್ದೇನೆ . ಬಂಧನದ ಬಳಿಕ ತಾನು ಇದುವರೆಗೆ ಏನನ್ನೂ ತಿಂದಿಲ್ಲ ಎಂದು ದೂರಿದರು . ಶರೀರದ ಮೇಲೆ ಚಿತ್ರಹಿಂಸೆಯ ಗಾಯಗಳಿವೆಯೇ? ಎಂಬ ಪ್ರಶ್ನೆಗೆ ತಡ ಬಡಾಯಿಸಿದ ಅವರು, ತನ್ನನ್ನು ಹಿಂಸಿಸಲು ಪೋಲಿಸರು ವಿಶೇಷ ಪದ್ಧತಿ ಉಪಯೋಗಿಸಿದ್ದಾರೆ. ಶರೀರದಮೇಲೆ ಯಾವುದೇ ಕಾಣುವ ಗಾಯವಿಲ್ಲ. ದಯವಿಟ್ಟು ತನ್ನನ್ನು ಎ.ಟಿ.ಎಸ್ ವಶಕ್ಕೆ ನೀಡಬೇಡಿ. ದೆರಾವುದಾದರೂ ತನಿಕೆ ಸಂಸ್ಥೆ ಗೆಒಪ್ಪಿಸಿ ಎಂದು ಅಂಗಲಾಚಿದರು. ತನ್ನ ಕೊಠಡಿಯೊಳಗೆ ಪಾಂಡೆಯನ್ನು ಪರೀಕ್ಷಿಸಿದ ನಯಾದೀಷರು ಅವರಿಗೆ ನ.೨೬ ರ ವರೆಗೆಪೋಲಿಸ್ ಕಸ್ಟಡಿ ವಿದಿಸಿದರು. ಸರಕಾರೀ ವಕೀಲರು ಮುಂಬೈ ಕಿಮ್ ಆಸ್ಪತ್ರೆಯ ವೈದ್ಯಕೀಯ ಹಾಗೂ ಕ್ಷಕಿರಣ ವರದಿ ಸಲ್ಲಿಸಿದ್ದು, ಅದರಲ್ಲಿ ಪಾಂಡೆ ಆರೋಗ್ಯವಾಗಿದ್ದರೆಂದು ಹೇಳಲಾಗಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ