ಸೋಮವಾರ, ನವೆಂಬರ್ 17, 2008

ಅಸ್ಸಾಂ ಸ್ಪೋಟದಲ್ಲಿ ಆರೆಸ್ಸಸ್ ಕೈವಾಡ : ಉಲ್ಫಾ

ಉವಾಹತಿ, 11: ಅಕ್ಟೋಬರ್ 30 ಅಸ್ಸಾಂ ಸ್ಪೋಟ ಹಾಗೂ ಬೋಡೊ ಪ್ರಾಂತೀಯ ಆಡಳಿತ (BTAT) ಜಿಲ್ಲೆಯಲ್ಲಿ ನಡೆದ ಜನಾಂಗಿಯ ಹಿಂಸಾಚಾರದಲ್ಲಿ ಆರೆಸ್ಸೆಸ್ ಭಾಗಿಯಾಗಿದೆಯೆಂದು ನಿಷೇದಿತ ಉಲ್ಫಾ ಸಂಘಟನೆ ಆರೋಪಿಸಿದೆ. ಸ್ಪೋಟದಲ್ಲಿ 85 ಹಾಗೂ ಜನಾಂಗಿಯ ಹಿಂಸಾಚಾರದಲ್ಲಿ 55 ಮಂದಿ ಅಸುನೀಗಿದ್ದಾರೆ. ಉಲ್ಫಾ ಅದ್ಯಕ್ಷ ಅರವಿಂದ ರಾಜಕ್ಹೊವ ಹೊರಡಿಸಿರುವ -ಮೇಲ್ ಹೇಳಿಕೆಯೊಂದರಲ್ಲಿ, ಅಸ್ಸಾಂ ಸಚಿವ ಹಿಮಂಥ ಭಿಸ್ವಾ ಶರ್ಮ ಆರೆಸ್ಸೆಸ್ ಏಜೆಂಟ್ ಆಗಿದ್ದು , ಸ್ಪೋಟದಲ್ಲಿ ತನ್ನ ಒಳಗೊಲ್ಲುವಿಕೆಯನ್ನು ಮರೆಮಾಚಲು ಉಲ್ಫಾವನ್ನು ದೂರುತಿದ್ದಾರೆ. ಶರ್ಮ ಕೊಂಗ್ರೆಸ್ಸ್ ನವರಾಗಿರಲಿ ಅಥವಾ ಬಿಜೆಪಿ ಯವರಾಗಿರಲಿ ಅವರು ವಾಸ್ತವವಾಗಿ ಆರೆಸ್ಸೆಸ್ ಏಜೆಂಟ್ ರಾಗಿದ್ದಾರೆ. ಅವರ ಕೈವಾಡವನ್ನು ಮರೆಮಾಚಲು ದಾರಿ ತಾಪ್ಪಿಸುವ್ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಅಸ್ಸಾಂನ ನಾಲ್ಕು ಪಟ್ಟಣಗಳಲ್ಲಿ .30 ರಂದು ನಡೆದ ಸ್ಪೋಟಗಳಲ್ಲಿ ಅರೆಸ್ಸೆಸ್ನ ಕೈವಾಡ ಇರುವ ಬಗ್ಗೆ ಉಲ್ಫಾ ಸಾಕಷ್ಟು ಪುರಾವೆಗಳನ್ನು ಹೊಂದಿದೆಯೆಂದು ರಾಜಕ್ಹೊವ ಪ್ರತಿಪಾದಿಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಸ್ಪೋಟ ನಡೆಸಲು ಆರೆಸ್ಸೆಸ್ ಗುಪ್ತ ಸೂಚನೆ ಕಳುಹಿಸಿದೆಯೆಂದು ಕೆಲವು ತಿಂಗಳ ಹಿಂದೆ ಉಲ್ಫಾ ತನ್ನ ಮುಕವಾಣಿ 'ಫ್ರೀಡಂ' ನಲ್ಲಿ ಹೇಳಿತ್ತು . ಆದ್ರೆ ರಾಜ್ಯ ಸರಕಾರ ಭಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅವರು ಆರೋಪಿಸಿದ್ದಾರೆ. ಇದಲ್ಲದೇ , ಬಿಜೆಪಿ ಯೇತರ ರಾಜ್ಯಗಳಲ್ಲಿ ಇತ್ತೇಚೆಗೆ ಸಂಭವಿಸಿರುವ ಸ್ಪೋಟಗಳಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಒಳಗೊಂಡಿರುವುದು ನಡೆದಿರುವ ಬಂಧನಗಳಿಂದ ಸಾಬೀತಾಗಿದೆಯೆಂದು ರಾಜಕ್ಹೊವ ನುಡಿದಿದ್ದಾರೆ.

With a little help: People try to pull a vehicle near a blast site in Guwahati on Thursday.(AP)

ಕಾಮೆಂಟ್‌ಗಳಿಲ್ಲ: