ಭಾನುವಾರ, ನವೆಂಬರ್ 16, 2008

ಲೆ!ಕರ್ನಲ್ ಪುರೋಹಿತ್ ಗೆ ಸೇನೆಯಿಂದ ನಿಷೇಧ....!

ಹೊಸದಿಲ್ಲಿ : ಮಾಲೆಂಗವ್ ಸ್ಪೋಟ ಪ್ರಕರಣದಲ್ಲಿ ATS ಬಂಧಿಸಿರುವ ಲೆ|| ಶ್ರೀಕಾಂತ್ ಪುರೋಹಿತ್ ರನ್ನು ಸೇನೆಯು 'ಶಿಸ್ತು-ನಿಗಾ ನಿಷೇಧ'ದಡಿಯಲ್ಲಿರಿಸಿದೆ. ಇದರಿಂದಾಗಿ ಅವರಿಗೆ ಭಡ್ತಿ , ಹೊಸ ಹುದ್ದೆ ಇತ್ಯಾದಿ ದೊರೆಯುವುದಿಲ್ಲ ಹಾಗೂ ಪ್ರಸ್ತಕ ಹೊಣೆಗಾರಿಕೆಯಿಂದ ಮುಕ್ತಿ ನೀಡಲಾಗಿದೆ. ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಂದಿನಿಂದ ವಿಚಾರಣೆ ಅಂತ್ಯಗೊಂಡು ವರದಿ ಸಲ್ಲಿಸುವ ವರೆಗೆ ನಿಷೇದ ಜಾರಿಯಲ್ಲಿರುತ್ತದೆ ಎಂದು ಮೂಲಗಳು ತಿಳಿಸಿದೆ. ನ್ಯಯಾಯಲವು ಆರೋಪಿಯನ್ನು ಖುಲಾಸೆಗೊಳಿಸುವವರೆಗೆ ನಿಷೇದ ಮುಂದುವರಿಯಲಿದ್ದರೂ , ಪುರೋಹಿತ್ ಸಂಬಳ ಹಾಗೂ ಅಧಿಕ್ರತ ನಿವಾಸವನ್ನು ಅದುವರೆಗೆ ಹೊಂದಿರಲು ಅರ್ಹರಾಗುತ್ತಾರೆ. ಇದೇ ವೇಳೆ ಪುರೋಹಿತ್ 'ಥಾನೆ' ಹಾಗೂ ಮುಂಬೈಗಳಲ್ಲಿ ನಾಟಕವೊಂದರ ವೆಲ್ ಸಂಭವಿಸಿರುವ ಸ್ಪೋಟಗಳ ಆರು ಮಂದಿ ಆರೋಪಿಗಳ ಸಂಭಂದದ ಕುರಿತು ATS ತನಿಕೆ ನಡೆಸುತ್ತಿದೆ.
ಥಾನೆ ಹಾಗೂ ವಾಷಿಗಳ ಸ್ಪೋಟ ಆರೋಪಿ , ಹೋಮಿಯೋಪತಿ ವೈದ್ಯ , ಹೇಮಂತ್ ಚಾಲ್ಕೆ ಎಂಬಾತನೊಂದಿಗೆ ಪುರೋಹಿತ್ ಗೆ ಸಂಬಂದವಿದೆಯೇ ಎಂಬುದನ್ನೂ ಅದು ಪರಿಶೀಲಿಸಲಿದೆ. ಹಿಂದೂ ಜಾಗೃತಿ ಸಮಿತಿ ಹಾಗೂ ಸನಥನ ಸಂಸ್ಥ ಎನ್ನುವ ಸಂಘಟನೆಗಳು ನಾಟಕ ಮಂದಿರ ಸ್ಪೋಟದಲ್ಲಿ ಒಳಗೊಂಡಿದೆ ಎನ್ನಲಾಗಿದ್ದು , ಬಂದಿತ ಆರು ಮಂದಿಯ ವಿರುದ್ದ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇದೇ ವೇಳೆ , ಇಂದು ಪುರೋಹಿತ್ ರನ್ನು ಬೆಂಗಳೂರು ನಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ . ನಿವ್ರ್ತ ಮೇಜರ್ ಉಪಾದ್ಯಾಯರ ಮಂಪರು ಪರೀಕ್ಷೆ ನಿನ್ನೆ ನಡೆದಿತ್ತು.

ಭಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರಿ.

ಕಾಮೆಂಟ್‌ಗಳಿಲ್ಲ: