ಬಿಜೆಪಿ ನಾಯಕನ ವಿಚಾರಣೆ
ಹೊಸದೆಲ್ಲಿ, ನ.11: ಮಾಲೆಂಗಾವ್ ಸ್ಪೋಟದ ಸಂಬಂಧ ಹೊಸ ಮಾಹಿತಿಗಳು ಹೊರ ಬಿದ್ದಿದ್ದು , ಪ್ರಕರಣದಲ್ಲಿ ಒಳಗೊಂಡಿರುವ ಶಂಕೆ ಇರುವ ಸಂಘ ಪರಿವಾರದ ನಾಯಕ , ಬಿಜೆಪಿ ಮುಖಂಡನೊಬ್ಬನ ವಿಚಾರಣೆಗಾಗಿ ATS ತನ್ನ ತಂಡವೊಂದನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿದೆ. ಆ ಶಂಕಿತ ವ್ಯಕ್ತಿಯ ವಿಚಾರಣೆಗೆ ನ್ಯಾಯಾಲಯ ತಮಗೆ ಅನುಮತಿ ನೀಡಿದೆಯೆಂದು ಸಾರ್ವಜನಿಕ ಅಭಿಯೋಜಕ ಅಜಯ್ ಮಿಸರ್ ತಿಳಿಸಿದ್ದಾರೆ. ಸ್ಪೋಟಕ್ಕಾಗಿ ಹಣವನ್ನು ಹವಾಲ ಮೊಲಕ ಸಾಗಿಸಲಾಗಿದೆ ಎಂದು ಪ್ರಸಿಕುಶನ್ ಸೋಮವಾರ ಹೇಳಿದೆ . ಇದಕ್ಕೆ ಪ್ರಕ್ರಥ ಬಂಧನದಲ್ಲಿ ಇರುವ 'ಅಭಿನವ ಭಾರತ್ 'ನ ಖಜಾಂಜಿ ಅಜಯ್ ರಹಿರ್ಕರ್ ನ ಖಾತೆಯನ್ನು ಬಳಸಲಾಗಿದೆಯೆಂದು ಅದು ತಿಳಿಸಿದೆ. ಈ ನಿಧಿಯನ್ನು ಸ್ಪೋಟಕ ಹಾಗು ಶಸ್ತ್ರಾಸ್ತ್ರ ತರಬೇತಿ ಹಾಗೂ ಖರೀದಿಗಾಗಿ ಬಳಸಲಾಗಿತ್ತೆನ್ನಲಾಗಿದೆ. ಆ ಹಣ ಯಾರಿಗೆ ಹೋಗಿದೆಯೆಂಬ ವಿವರವನ್ನು ATS ನೀಡಿದೆ . ಅದರ ಮೂಲಗಲ ಪ್ರಕಾರ , ಸಮೀರ್ ಕುಲಕರ್ಣಿ ಗೆ ರೂ. 1,15,000, ರಮೇಶ್ ಉಪಧ್ಯಯರಿಗೆ ರೂ. 95,000 ಹಾಗೂ ರಾಕೇಶ್ ದಾವ್ದೆ ಗೆ ರೂ. 3,20,000 ಗಳನ್ನೂ ರಹಿರ್ಕರ್ ನೀಡಿದ್ಧಾನೆ . ಮಾಲೆಂಗಾವ್ ಸ್ಪೋಟ ಹಾಗೂ ಅದರ ಹಿಂದಿನ ಕೆಲವು ಸ್ಪೋಟಗಳಿಗೆ ಸಂಭಂದವಿರುವುದನ್ನು ಹಾಗೂ ಆರೋಪಿ ರಾಕೇಶ್ ದಾವ್ದೆ ಜಾಲ್ನ, ಪರ್ಬ್ಬ್ಹನಿ ಹಾಗೂ ಪುರ್ನಾ ಸ್ಪೋಟ ಹಾಗೂ 2006 ರ ನಾಂದೇಡ್ ಸ್ಪೋಟಗಳಲ್ಲಿ ಸಂಬಂಧ ಹೊಂದಿರುವನೆಂದು ATS ಬಹಿರಂಗ ಪಡಿಸಿದೆ. ಆದಗಿಯೂ ತಲೆ ಮರೆಸಿಕೊಂಡಿರುವ ಆರೋಪಿ ದಾಮಜಿ ಕಲ್ಸಂಗ್ರೆ ಎಂಬಾತ ಈ ಪ್ರಕರಣದ ಪ್ರದಾನ ಆರೋಪಿ ಎಂದು ಪ್ರಾಸಿಕುಶನ್ ಪ್ರತಿಪಾದಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ